Tuesday, May 6, 2008


ನೀ ಸಿಗದೆ ಬಾಳೊಂದು ಬಾಳೇ ಕೃಷ್ಣನಾ ತಾಳಲಾರೆ ಈ ವಿರಹ ಕೃಷ್ಣ ನೀ ಕಮಲವಿಲ್ಲದ ಕೆರೆ ನನ್ನ ಬಾಳುಚಂದ್ರನಿಲ್ಲದ ರಾತ್ರಿ ಬೀಳುನೀ ಸಿಗದೆ ಉರಿ ಉರಿ ಕಳೆದೆ ಇರುಳಮಾತೆಲ್ಲ ಬಿಗಿದಿದೆ ದು:ಖ ಕೊರಳ ನೀ ಅನ್ನ ಸೇರದು ನಿದ್ದೆ ಬಂದಿಹುದೆಂದುಕುದಿವೆ ಒಂದೇ ಸಮ ಕೃಷ್ಣ ಎಂದುಕೃಷ್ಣ ....ಯಾರು ಅರಿವರೋ ಹೇಳು ನನ್ನ ನೋವತಲ್ಲಣಿಸಿ ಕೂಗುತಿದೆ ದಾಸಿ ಜೀವ ನೀ ಒಳಗಿರುವ ಗಿರಿಧರನೇ ಹೊರಗೆ ಬಾರೋಕಣ್ಣೆದುರು ನಿಂತು ಆ ರೂಪ ತೋರೋಜನುಮ ಜನುಮದ ರಾಗ ನನ್ನ ಪ್ರೀತಿನಿನ್ನೊಳಗೆ ಹರಿವುದೇ ಅದರ ರೀತಿ ನೀ
ನೀನಿಲ್ಲದೆ ನನಗೇನಿದೆ
ಮನಸೆಲ್ಲಾ ನಿನ್ನಲ್ಲೆ ನೆಲೆಯಾಗಿದೆ
ಕನಸೆಲ್ಲಾ ಕಣ್ಣಲ್ಲೆ ಸೆಲೆಯಾಗಿದೆ ನೀ
ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವು ಹಗಲಿರುಳು ತಂದೆ ನೀನು
ಎದೆಯಾಸೆ ಏನು ಎಂದು ನೀ ಕಾಣದಾದೆ
ನಿಶೆಯೊಂದೆ ನನ್ನಲ್ಲಿ ನೀ ತುಂಬಿದೆ
ಬೆಳಕೊಂದೆ ನಿನ್ನಿಂದ ನಾ ಬಯಸಿದೆ ನೀ
ಒಲವೆಂಬ ಕಿರಣ ಬೀರಿ ಒಳಗಿರುವ ಬಣ್ಣ ತೆರೆಸಿ
ಒಳಗಿರುವ ಎದೆ ನೆಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದ ನಾ ತಾಳುವೆ
ಹೊಸ ಲೋಕ ನಿನ್ನಿಂದ ನಾ ಕಾಣುವೆ ನೀ
ತೊರೆದು ಹೋಗದಿರೊ ಜೋಗಿ
ಅಡಿಗೆರಗಿದ ಈ ದೀನಳ ಮರೆತು ಸಾಗುವೆ ಏಕೆ ವಿರಾಗಿ
ಪ್ರೇಮ ಹೋಮದ ಪರಿಮಳ ಪಥದಲಿ ಸಲಿಸು ದೀಕ್ಷೆ ಎನಗೆ
ನಿನ್ನ ವಿರಹದಲಿ ಒರೆದು ಹೋಗಲು ಸಿದ್ಧಳಿರುವ ನನಗೆ ತೊರೆದು
ಹೂಡುವೆ ಗಂಧದ ಚಿತೆಯ ನಡುವೆ ನಿಲುವೆ ನಾನೇ
ಉರಿ ಸೋಕಿಸು ಪ್ರಭುವೆ ಚಿತೆಗೆ ಪ್ರೀತಿಯಿಂದ ನೀನೇ ತೊರೆದು
ಉರಿದು ಉಳಿವೆನು ಬೂಧಿಯಲಿ ಲೇಪಿಸಿಕೋ ಅದ ಮೈಗೆ
ಮೀರಾ ಪ್ರಭು ಗಿರಿಧರನೇ ಜ್ಯೋತಿಯು ಜ್ಯೋತಿಯ ಸೇರಲಿ ಹೀಗೆ ತೊರೆದು

ಎದೆ ತುಂಬಿ ಹಾಡಿದೆನು ಅಂದು ನಾನು

ಮನವಿಟ್ಟು ಕೇಳಿದಿರಿ ಅಲ್ಲಿ ನೀವು ಎದೆ

ಇಂದು ನಾ ಹಾಡಿದರೂ ಅಂದಿನಂತೆಯೆ ಕುಳಿತು

ಕೇಳುವಿರಿ ಸಾಕೆನಗೆ ಅದುವೆ ಬಹುಮಾನ

ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ ಎದೆ

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ

ಹಾಡುವುದು ಅನಿವಾರ್ಯ ಕರ್ಮ ನನಗೆ

ಕೇಳುವವರಿಹರೆಂದು ನಾ ಬಲ್ಲೆನದರಿಂದ

ಹಾಡುವೆನು ಮೈದುಂಬಿ ಎಂದಿನಂತೆಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ

ಎದೆ ತುಂಬಿ ಹಾಡಿದೆನು ಇಂದು ನಾನುಮನವಿಟ್ಟು ಕೇಳಿದಿರಿ ಇಲ್ಲಿ ನೀವು..

ನನ್ನ ಮೆಚ್ಚಿನ ಗೀತೆ

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನ್ನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಯಾವ
ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಕಣದಿ ರಿಂಗಣ ಯಾವ
ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ
ಒಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ ಯಾವ
ವಿವಶವಾಯಿತು ಪ್ರಾಣ ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತೊಡೆವುದೇ ಜೀವನ
ಯಾವ ಮೋಹನ ಮುರಳಿ ಕರೆಯಿತು ಇದ್ದಕ್ಕಿದ್ದೆಡೆ ನಿನ್ನನ್ನು
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು ಯಾವ